ಅಂಗಡಿಯಲ್ಲಿ ಕನ್ನಡ ನುಡಿ Angadiyalli Kannada Nudi

 —
Rating
Likes Talking Checkins
347 0
About ಕನ್ನಡ ಗ್ರಾಹಕರ ಕೂಟದದ ಮೂಲಕ ಗ್ರಾಹಕ ಪ್ರಜ್ಞೆಯ ಚಿಂತನೆಯನ್ನು ಹರಡುವ ಉದ್ದೇಶದಿಂದ ಈ ಪುಟ ತೆರೆಯಲಾಗಿದೆ.
Description ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತ ಸ್ಥಿತಿ ಇಂದು ಇದೆಯೇ? ಒಬ್ಬ ಕನ್ನಡಿಗ ತನ್ನದೇ ನಾಡಿನ ಯಾವುದೇ ಅಂಗಡಿ ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ ಮತ್ತು ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದೆ ಸಲೀಸಾಗಿ ವಹಿವಾಟು ಮಾಡುವ ವ್ಯವಸ್ಥೆ ಇಂದು ಇದೆಯೇ ಎಂದು ಗಮನಿಸಿದರೆ ಅಚ್ಚರಿ ಮತ್ತು ನಿರಾಶೆಗೊಳಗಾಗುವ ಸ್ಥಿತಿ ಇಂದು ಕನ್ನಡ ನಾಡಿನಲ್ಲಿದೆ. ಮಾರುಕಟ್ಟೆಯಲ್ಲಿ ಕನ್ನಡದ ಈ ಸ್ಥಿತಿ ಬದಲಾಗಬೇಕಲ್ಲವೇ? ಆ ಬದಲಾವಣೆ ಜಾಗೃತರಾದ ಕನ್ನಡ ಗ್ರಾಹಕರಿಂದ ಮಾತ್ರ ಸಾಧ್ಯ ಅನ್ನುವುದು ನಮ್ಮ ನಿಲುವಾಗಿದ್ದು, ಈ ನಿಟ್ಟಿನಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಎಲ್ಲರಲ್ಲಿ ಜಾಗೃತಿ ಮೂಡಿಸಿಸುವುದು, ಗ್ರಾಹಕ ಸೇವೆಯ ವ್ಯಾಪ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು, ಗ್ರಾಹಕ ಸೇವೆಯಲ್ಲಿ ಭಾಷೆಯ ಆಯಾಮದ ಬಗ್ಗೆ ಜಾಗೃತಿ ಮೂಡಿಸುವುದು, ಅಗತ್ಯ ಬಂದಾಗ ಕಾನೂನು ಬದ್ಧ ಹೋರಾಟಗಳನ್ನು ರೂಪಿಸುವುದು ಮುಂತಾದ ಉದ್ದೇಶಗಳನ್ನು ಹೊತ್ತು “ಕನ್ನಡ ಗ್ರಾಹಕರ ಕೂಟ” ಎಂಬ ಸಂಸ್ಥೆಯನ್ನು ಆರಂಭಿಸಲಾಯಿತು.

ಕನ್ನಡ ಗ್ರಾಹಕರ ಕೂಟದ ಮೂಲಕ ಗ್ರಾಹಕ ಪ್ರಜ್ಞೆಯ ಚಿಂತನೆಯನ್ನು ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಹರಡುವ ಉದ್ದೇಶದಿಂದ “ಅಂಗಡಿಯಲ್ಲಿ ಕನ್ನಡ ನುಡಿ” ಅನ್ನುವ ಈ ಫೇಸ್ ಬುಕ್ ಪುಟವನ್ನು ಮಾಡಲಾಗಿದ್ದು, ಇಲ್ಲಿ ಕನ್ನಡ ಗ್ರಾಹಕರು ಕನ್ನಡದಲ್ಲೇ ಸೇವೆ ಪಡೆದ, ಪಡೆಯಲಾಗದ ತಮ್ಮ ಅನುಭವ ಹಂಚಿಕೊಳ್ಳುವುದರ ಜೊತೆಗೆ ಒಟ್ಟಾಗಿ, ಒಗ್ಗಟ್ಟಿನ ಗ್ರಾಹಕರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡು, ಬದಲಾವಣೆಗಳನ್ನು ಕಂಡುಕೊಳ್ಳುತ್ತಿದ್ದಾರೆ. ಬನ್ನಿ, ಈ ಬದಲಾವಣೆಯಲ್ಲಿ ತಾವೂ ಪಾಲ್ಗೊಳ್ಳಿ.

ನಮ್ಮ ಚಟುವಟಿಕೆಗಳು ಕೆಳಕಂಡ ತಾಣಗಳಲ್ಲಿ ಕೂಡ ನಡೆಯುತ್ತವೆ.

ಕನ್ನಡದಲ್ಲಿ ಗ್ರಾಹಕಸೇವೆ ಬಗ್ಗೆ ಚರ್ಚಿಸಲು ಒಂದು ವೇದಿಕೆ -http://www.kannadagrahakarakoota.org/forums/
ಕನ್ನಡದಲ್ಲಿ ಗ್ರಾಹಕಸೇವೆ ಬಗ್ಗೆ ಚರ್ಚಿಸಲು ಒಂದು ಗೂಗಲ್ ಗುಂಪು - https://groups.google.com/forum/#!forum/jaagruta_graahakaru
ಕನ್ನಡದಲ್ಲಿ ಗ್ರಾಹಕಸೇವೆ ಬಗ್ಗೆ ಚರ್ಚೆ ಟ್ವಿಟ್ಟರ್ ನಲ್ಲಿ -
https://twitter.com/KannadaGrahaka

ಈ ಪುಟವನ್ನು ನಿರ್ವಹಿಸುತ್ತಿರುವವರು
1. ಗಣೇಶ್ ಚೇತನ್ (https://www.facebook.com/ganesh.chetan)
2. ರವಿ ಸಾವ್ಕಾರ್ (www.facebook.com/ravi.savkar)
3. ಜಯಂತ್ ಸಿದ್ಮಲ್ಲಪ್ಪ (www.facebook.com/Jayanth.Sidmallappa)
4. ಬಾಬು ಅಜಯ್ (www.facebook.com/BabuAjay.KumarPN)
Web site www.kannadagrahakarakoota.org
Share

Reviews and rating

Avatar
Rate this community